New Year 2023 Wishes in Kannada Language

ಮೇಲಿನಿಂದ ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ ಎಂಬ ಭರವಸೆಯಲ್ಲಿ ನಿಮಗೆ 2023. ಹೊಸ ವರ್ಷದ ಶುಭಾಶಯಗಳು.

2023 ನಿಮಗೆ, ನಿಮ್ಮ ಕುಟುಂಬಕ್ಕೆ ಆರೋಗ್ಯ, ಸಡಗರ, ಯಶಸ್ಸು, ಸಮೃದ್ಧಿ ದಯಪಾಲಿಸಲಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.

ಸಮಯ ಅಮೂಲ್ಯ, ಪ್ರತಿಕ್ಷಣವನ್ನೂ ಪ್ರೀತಿಸೋಣ, ಪ್ರತಿದಿನವನ್ನೂ ಸದ್ಬಳಕೆ ಮಾಡೋಣ… ಹೊಸ ವರ್ಷದ ಶುಭಾಶಯಗಳು.

2023 ನಿಮ್ಮ ಕನಸುಗಳಿಗೆ ರೆಕ್ಕೆ ಮೂಡಲಿ, ನಿಮ್ಮ ಉದ್ದೇಶದ ಗುರಿ ಮುಟ್ಟಲಿ, ಕೆಲಸ-ಕಾರ್ಯಗಳಲ್ಲಿ ಯಶಸ್ಸು ಸಿಗಲಿ ಹೊಸ ವರ್ಷದ ಶುಭಾಶಯಗಳು.

ಹೊಸ ವರ್ಷದ ದಿನವು ಪ್ರತಿಯೊಬ್ಬ ಮನುಷ್ಯನ ಜನ್ಮದಿನವಾಗಿದೆ. ಹೊಸ ವರ್ಷದ ಶುಭಾಶಯಗಳು.

ಹೊಸ ವರ್ಷವನ್ನು ಸ್ವಾಗತಿಸಲು ಇನ್ನೇನು ಕೆಲವೇ ಕೆಲವು ದಿನಗಳು ಬಾಕಿವೆ. ಹೊಸ ವರ್ಷ ಎಂದರೆ ಏನೋ ಹೊಸ ನಿರೀಕ್ಷೆ ಮತ್ತು ಭರವಸೆ.

ನಮ್ಮ ಬದುಕಿನಲ್ಲಿ ಎಲ್ಲವೂ ಚೆನ್ನಾಗಿರಲಿ ಎಂದು ಮನಸ್ಸು ಬಯಸುವುದು, ಅದರಂತೆ ಹೊಸ ವರ್ಷದಂದು ನಮ್ಮ ಸ್ನೇಹಿತರು, ಬಂಧು ಬಳಗಕ್ಕೆ ಈ ವರ್ಷ ನಿಮಗೆ ಒಳಿತನ್ನೇ ಮಾಡಲಿ ಎಂದು ತುಂಬ ಮನಸ್ಸಿನಿಂದ ಹಾರೈಸುತ್ತೇವೆ.

2023ರಲ್ಲಿ ಹೊಸ ವರ್ಷದ 365 ದಿನಗಳ ಬದುಕಿನ ಪುಟ ತೆರೆದುಕೊಳ್ಳಲಿದೆ. ಇದರಲ್ಲಿ ಒಳಿತನ್ನೇ ಬರೆಯುವ, ಖುಷಿಯಾಗಿ ಬಾಳುವ. ಎಲ್ಲರಿಗು ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಹೀಗೆ ಎಲ್ಲವೂ ಹೊಸತು. ಇಲ್ಲಿಂದ ನಮ್ಮ ಬದುಕಿನ ಪುಸ್ತಕದ ಹೊಸ ಪುಟ ಆರಂಭವಾಗುತ್ತದೆ. ಸಮಯ ಎಂಬುದು ಬಲು ಅಮೂಲ್ಯ. ಕಳೆದು ಹೋದ ಕ್ಷಣ ಮತ್ತೆ ಸಿಗದು.

ಹೀಗಾಗಿ, ಈ ಬದುಕಿನ ಹೊಸ ಪುಟದಲ್ಲಿ ಯಶಸ್ಸು, ಖುಷಿ, ಶಾಂತಿ, ನೆಮ್ಮದಿಯ ನೆನಪುಗಳೇ ದಾಖಲಾಗುವಂತೆ ಮಾಡುವುದು ಮುಖ್ಯ. ಇದೇ ಹೊಸ ಹುರುಪಿನಲ್ಲಿ 2023ನೇ ವರ್ಷವನ್ನು ಸ್ವಾಗತಿಸೋಣ.

ಇಂತಹ ಶುಭ ಸಂದರ್ಭದಲ್ಲಿ ನಮ್ಮ ಪ್ರೀತಿಪಾತ್ರರಿಗೆ ಕಳುಹಿಸಿಕೊಡಬೇಕಾದಂತಹ ಶುಭ ಸಂದೇಶಗಳು ಇಲ್ಲಿವೆ.

ಹೊಸ ವರ್ಷಕ್ಕೆ ಹೊಸದನ್ನು ಬರಮಾಡಿಕೊಳ್ಳಲು ಮತ್ತು ಅದನ್ನು ಸರಿಯಾಗಿ ಪಡೆಯಲು ನಮಗೆ ಮತ್ತೊಂದು ಅವಕಾಶ. ಹೊಸ ವರ್ಷದ ಶುಭಾಶಯಗಳು.